ರೂಪೇಶ್ ಶೆಟ್ಟಿ ಇವರು ಕನ್ನಡ, ತುಳು ಚಿತ್ರರಂಗದ ನಟ . ಅವರು ಮಂಗಳೂರಿನ ಪ್ರಸಿದ್ಧ ರೇಡಿಯೋ ಜಾಕೀ ಮತ್ತು ಮಾಡೆಲ್ . ಅವರು ಕನ್ನಡ , ತುಳು ಮತ್ತು ಕೊಂಕಣಿ ಯಂತಹ ೩ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. == ಜನನ ಮತ್ತು ವೃತ್ತಿ == ರೂಪೇಶ್ ಇವರು ೧೫ ಆಗಸ್ಟ್ ೧೯೯೧ ರಂದು ಕಾಸರಗೋಡಿನ ಉಪ್ಪಳದಲ್ಲಿ ಜನಿಸಿದರು . ರೂಪೇಶ್ ಶೆಟ್ಟಿಯವರು ಮೊದಲಿಗೆ ನಮ್ಮಟಿವಿ ಚಾನೆಲ್ ನಲ್ಲಿ ನಿರೂಪಕನಾಗಿ ಕಾಣಿಸಿಕೊಂಡರು ಹಾಗೂ ಮಂಗಳೂರಿನಲ್ಲಿ ಆರ್ಜೆಯಾಗಿ ಜನಪ್ರಿಯತೆ ಗಳಿಸಿದರು . ಅವರು ತಮ್ಮ ವೃತ್ತಿಜೀವನವನ್ನು ದಿಬ್ಬಣ ಎಂಬ ತುಳು ಚಿತ್ರದಲ್ಲಿ ಕಿರು ಪಾತ್ರದಲ್ಲಿ ನಟಿಸುವ ಮೂಲಕ ಪ್ರಾರಂಭಿಸಿದರು ಹಾಗೂ ೨೦೧೫ ರ ಡೇಂಜರ್ ಜ಼ೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದರು . ಇವರು ತಮಿಳಿನ ಅತ್ಯಂತ ಪ್ರಸಿದ್ಧಿ ಹೊಂದಿರುವ ಕೊಲವೆರಿ ಡಿ ಎಂಬ ಹಾಡನ್ನು ಪುನರ್ ನಿರ್ದೇಶಿಸಿ ಹಾಡಿದ್ದಾರೆ . ೨೦೧೬ ರಲ್ಲಿ ಇವರು ಐಸ್ ಕ್ರೀಮ್ ಎಂಬ ತುಳು ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು . ನಂತರ ೨೦೧೭ ರಲ್ಲಿ ಪಿಶಾಚಿ ೨ , ನಿಶಬ್ಧ ೨ ಮತ್ತು ಸ್ಮೈಲ್ ಪ್ಲೀಜ್ ಎಂಬ ಕನ್ನಡ ಚಲನಚಿತ್ರಗಳಲ್ಲಿ ಕಿರು ಪಾತ್ರವನ್ನು ವಹಿಸಿದರು . ಹಾಗೂ ಇವರು ೨೦೧೭ ರ , ಕೃಷ್ಣಪ್ರಸಾದ್ ಉಪ್ಪಿನಕೋಟೆ ನಿರ್ದೇಶಿಸಿರುವ ರಂಗ್ ರಂಗ್ ದ ದಿಬ್ಬಣ ಎಂಬ ಚಿತ್ರದಲ್ಲೂ ನಟಿಸಿದರು ಮತ್ತು ೨೦೧೮ ರ ಅಮ್ಮೆರ್ ಪೋಲಿಸಾ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ವಹಿಸಿ ನಟಿಸಿದ್ದಾರೆ . == ಫಿಲ್ಮೋಗ್ರಾಫಿ == === ನಟನಾಗಿ === === ಗಾಯಕನಾಗಿ === ಈ ಸಲ ಕಪ್ ನಮ್ಮದೇ - ಮೂಲ , ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಹಾಡಿದ ಹಾಡು . == ಉಲ್ಲೇಖಗಳು ==